Sagara Vital Statistics:

Population                                  :                      7.63 lakh [ 2011 census ](Sagara Sub Division)

Subdivisional headquarters     :                     Sagara

Sagara Coordinates                   :                     14.1667°N 75.0333°E

Average temperature                :                     15 to 32 degree celsius

Ideal time to visit Sagara          :                      June to March

Average rainfall                          :                      1951  mm

Rainy season                              :                      June to September

Main Rivers                                 :                      Varada and Sharavati

Languages                                  :                      Kannada, Hindi, English and Havyaka Kannada

Clothing                                      :                      Raincoat and umbrellas must during monsoon
                                                                            Winter(November-January) light woollens.

Main crops                                 :                       Arecanut, Pepper, Cardamom, Paddy.


Telephone Code                        :                      08183

 

RTO Code                                   :                       KA-15 (Sagara)

ಸಾಗರ ಎಂಬ ಮಲೆನಾಡ ಸ್ವರ್ಗ


ಸಾಗರ ವರದಾ ನದಿಯ ದಡದಲ್ಲಿರುವ ಸುಂದರ ನಗರ.ತನ್ನ ಪರಿಸರದಿಂದಲೇ ಪ್ರಸಿದ್ದವಾಗಿರುವ ಸಾಗರ ಮನದ ನೋವು ಮರೆಸುವ ಪಶ್ಚಿಮ ಘಟ್ಟಗಳ ಸುಂದರ ಹಸಿರು ಹೊದಿಕೆಯ ನಾಡು. ಕ್ರಿ.ಶ.1583 ರಿಂದ 1630 ರ ವರೆಗೆ ಆಳಿದ ಕೆಳದಿಯ ಹಿರಿಯ ವೆಂಕಟಪ್ಪ ನಾಯಕನಿಂದ ಸಾಗರವು ಅಸ್ತಿತ್ವಕ್ಕೆ ಬಂದಿತು.ಕೆಳದಿ ಅರಸರ ಕಾಲದಲ್ಲಿ ಸಾಗರವು ವ್ಯಾಪಾರ ಅಭಿವೃದ್ಧಿಗಳ ಮಾರುಕಟ್ಟೆ ಕೇಂದ್ರವಾಗಿತ್ತು.


ಏನಿದರ ವಿಶೇಷತೆ...?

ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನ ಹೊಂದಿರುವ ಸಾಗರಕ್ಕೆ ಪ್ರತಿನಿತ್ಯವೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.ಇಲ್ಲಿರುವ ಜೋಗ ಜಲಪಾತ ,ಲಿಂಗನಮಕ್ಕಿ ಜಲಾಶಯ,ಸಿಗಂದೂರು,ವರದಹಳ್ಳಿ,ಇಕ್ಕೇರಿ,ಹೊನ್ನೇಮರಡು,ಶರಾವತಿ ವನ್ಯಜೀವಿಧಾಮ,ಭೀಮೇಶ್ವರ,ದಬ್ಬೆ ಜಲಪಾತ ಹೀಗೆ ಹತ್ತು ಹಲವಾರು ಪ್ರವಾಸಿ ತಾಣಗಳು ಪ್ರವಾಸಿಗರ ಕಣ್ಮನ ತಣಿಸುತ್ತವೆ. ಅಲ್ಲದೇ ಇಲ್ಲಿನ ಲಿಂಗನಮಕ್ಕಿ ಹಿನ್ನೀರಿನ ಹೊನ್ನೇಮರುಡುವಿನಲ್ಲಿ ಸಾಹಸ ಜಲಕ್ರೀಡೆಗಳಾದ ರ್ಯಫ್ಟಿಂಗ್ ಸೇರಿದಂತೆ ಹಲವಾರು ಕ್ರೀಡೆಗಳಿಗೆ ಅವಕಾಶವಿದ್ದು ಕುಟುಂಬ ಸಮೇತ ಆಗಮಿಸಿ ಇದರ ಮಜಾ ಅನುಭವಿಸಬಹುದು.ಜೊತೆಗೆ ಗುಡ್ಡಗಾಡು ಸವಾರಿ,ಚಾರಣದಿಂದಲೂ ಅಮಿತ ಆನಂದ ಹೊಂದಬಹುದು. ಹಾಗೇ ಸಾಗರದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ 9 ದಿನಗಳ ಕಾಲ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆ ಕರ್ನಾಟಕ ರಾಜ್ಯದ ಎರಡನೇ ಅತೀ ದೊಡ್ಡ ಜಾತ್ರೆ, ಈ ಜಾತ್ರೆಗೆ ದಿನಕ್ಕೊಂದರಂತೆ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ಕರ್ನಾಟಕದ ಪ್ರಮುಖ ನಗರಗಳಿಂದ ಸಾಗರಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸುತ್ತಾರೆ. ಮುಖ್ಯವಾಗಿ ಸಾಗರದ ಸುತ್ತ ಹರಡಿರುವ ದಟ್ಟ ಅರಣ್ಯ ಹೊರ ಪ್ರಪಂಚದ ಅರಿವಾಗದಂತೆ ಪ್ರವಾಸಿಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ.


ಪ್ರಯಾಣ ಹೇಗೆ...?

ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಂದ ಸಾಗರಕ್ಕೆ ಬಸ್ ಸೌಲಭ್ಯವಿದೆ. ಇದಲ್ಲದೇ ಬೆಂಗಳೂರು ಮತ್ತು ಮೈಸೂರಿಗೆ ನೇರವಾದ ರೈಲಿನ ಸಂಪರ್ಕವಿದೆ.


ವಸತಿ ಹೇಗೆ...?

ಸಾಗರದಲ್ಲಿ ಉಳಿದುಕೊಳ್ಳಲು ಉತ್ತಮ ವ್ಯವಸ್ಥೆ ಇದೆ, ಕಡಿಮೆ ಬೆಲೆಯ ಹೋಟೆಲ್ ಇಂದ ಹಿಡಿದು ಐಷರಾಮಿ ವ್ಯವಸ್ಥೆ ಇರುವ ಹೋಟೆಲ್ ಗಳು ಮತ್ತು ಪಂಚತಾರ ಹೋಟೆಲ್ ಸಾಗರದಲ್ಲಿ ಲಭ್ಯವಿದೆ. ಇದಲ್ಲದೇ ಹೋಂ ಸ್ಟೇ ಗಳಲ್ಲೂ ತಂಗಬಹುದು.

ಸಾಗರದ ನಿಜವಾದ ಆನಂದ ಸವಿಯಲು ಒಂದೆರಡು ದಿನ ಬಿಡುವು ಮಾಡಿಕೊಂಡು ಹೋಗುವುದು ಸೂಕ್ತ.

"ಸಹ್ಯಾದ್ರಿಯ ಹೃದಯ" ಸಾಗರಕ್ಕೆ ಸ್ವಾಗತ