"ಸಹ್ಯಾದ್ರಿಯ ಹೃದಯ" ಸಾಗರಕ್ಕೆ ಸ್ವಾಗತ
ಶಕ್ತಿ ದೇವತೆ ಸಾಗರದ ಶ್ರೀ ಮಾರಿಕಾಂಬೆ.

ಶ್ರೀ ಮಾರಿಕಾಂಬ ಜಾತ್ರೆ

ಸಾಗರ ನಗರದ ಮಧ್ಯದಲ್ಲಿ ನೆಲಸಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ದೇಶದ ಕಲ್ಯಾಣಾರ್ಥವಾಗಿಯೂ, ಸುಭಿಕ್ಷಾರ್ಥವಾಗಿಯೂ ಸಾಗರದಲ್ಲಿ ಅತೀ ವಿಜೃಂಭಣೆಯಿಂದ, ವೈಭವದಿಂದ ನಡೆಯಲಿದೆ. ಜಾತಿ, ಮತ, ಬಡವಬಲ್ಲಿದರೆಂಬ ಭೇಧವಿಲ್ಲದೆ ಊರಿಗೆ ಊರೇ ಸಂಭ್ರಮಿಸುವ ಪ್ರತಿ ಮೂರು ವರ್ಷಗಳಿಗೊಮ್ಮೆ ಸಾಗರದಲ್ಲಿ ನಡೆಯುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಜನಸಾಗರವೇ ಸೇರಲಿದೆ. ಮಂಗಳವಾರ ಬೆಳ್ಳಿಗ್ಗೆ 5 ಗಂಟೆಗೆ ಸುಮಾರು 16 ಅಡಿ ಎತ್ತರದ ಶ್ರೀ ಮಾರಿಕಾಂಬಾ ದೇವಿಯನ್ನು ತವರುಮನೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಆ ದಿನ ಪೂಜಾ ಕಾರ್ಯಕ್ರಮ ಮತ್ತು ಕುಂಕುಮಾರ್ಚನೆಗಳ ಆನಂತರ ರಾತ್ರಿ 10 ಗಂಟೆಗೆ ಶ್ರೀ ಮಾರಿಕಾಂಬಾ ದೇವಿಯ ವೈಭವದ ರಥೋತ್ಸವವು ಬೀದಿ-ಬೀದಿಗಳಲ್ಲಿ ರಂಜನೀಯ ವಾದ್ಯ, ಡೊಳ್ಳು ಕುಣಿತ, ನಾದಸ್ವರ ಹಾಗೂ ಇನ್ನಿತರ ಮಂಗಳ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಸಾಗಿ ದೇವಿಯನ್ನು ಗಂಡನ ಮನೆಯಲ್ಲಿ ಪ್ರತಿಷ್ಠಾಪಿಸಲಾಗುವುದು. ಬುಧವಾರದಿಂದ ಬುಧವಾರದವರೆಗೆ ದೇವಿಯ ಕುಂಕುಮಾರ್ಚನೆ, ಉಡಿತುಂಬುವುದು, ಗಾವುಗುರಿ ಕಾರ್ಯಕ್ರಮ ಚಾಟಿ ಸೇವೆ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಬುಧವಾರ ರಾತ್ರಿ 10 ಗಂಟೆಗೆ ದೇವಿಯ ವಿಸರ್ಜನಾ ಕಾರ್ಯಕ್ರಮವನ್ನು ನಡೆಸುತ್ತಾರೆ. ಸಮಿತಿಯ ವತಿಯಿಂದ ನೆಹರು ಮೈದಾನದಲ್ಲಿ ರಾಜ್ಯಮಟ್ಟದ ಬಯಲು ಜಂಗಿ ಕುಸ್ತಿಗಳು ನಡೆಯುತ್ತವೆ. ಸಾಗರವು ಒಂದು ಐತಿಹಾಸಿಕ ಮಹತ್ವವಿರುವ ನಗರ . ಇಲ್ಲಿನ ಸ್ಥಳ ಪುರಾಣ, ಇತಿಹಾಸಗಳ ಪ್ರಕಾರ ಶಿವಪ್ಪನಾಯಕ ಮೂಲ ಪುರುಷನು ಈ ಊರಿನ ಎಡಬಲದಲ್ಲಿರುವ ಇಕ್ಕೆರಿ, ಕೆಳದಿಯಲ್ಲಿ ರಾಜ್ಯಾಡಳಿತ ಮಾಡಿದ್ದಾರೆ. ಸದಾಶಿವನಾಯಕನು ತನ್ನ ಆಡಳಿತ ಅವಧಿಯಲ್ಲಿ ಸಾಗರದಲ್ಲಿ ಭವ್ಯವಾದ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಗಣಪತಿ ಕೆರೆಯನ್ನು ನಿಮರ್ಿಸಿದನು. ಅನಂತರ ಕೆಳದಿ, ಇಕ್ಕೆರಿ ಸಂಸ್ಥಾನದ ಅರಸರು ತಮ್ಮ ಯುದ್ಧ ಸಾಮಗ್ರಿಗಳನ್ನು ಈ ಊರಿನಲ್ಲಿ ಸಂಗ್ರಹಿಸಿ ಅವುಗಳ ರಕ್ಷಣೆಗಾಗಿ ಈ ದೇವತೆಯ ಪೂಜೆ ನಿರಂತರವಾಗಿ ನಡೆಯಲು ಜಾತ್ರೆ, ಉತ್ಸವಗಳನ್ನು ನಡೆಸಲು ಅವಕಾಶ ಮಾಡಿ ಕೊಟ್ಟರಂತೆ, ಕೆಳದಿ ಇಕ್ಕೇರಿ ಸಂಸ್ಥಾನದ ಗಡಿ ದೇವತೆ ಮತ್ತು ಶಕ್ತಿ ದೇವತೆಯೇ ಈ ಮಾರಿಕಾಂಬಾ ದೇವಿಯೆಂದು ಊರಿನ ಹಿರಿಯರು ಅಭಿಪ್ರಾಯಪಡುತ್ತಾರೆ.

ಜಾತ್ರೆಯ ಹಿನ್ನೆಲೆ

ಬಹಳ ಕಾಲದ ಹಿಂದೆ ಸಾಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಾರಕ ರೋಗಗಳಾದ ಪ್ಲೇಗ್ ಮತ್ತು ಕಾಲರಾ ಜ್ವರಗಳಂತಹ ಸಾಂಕ್ರಾಮಿಕ ರೋಗಗಳು ಹರಡಿ ನೂರಾರು ಜನರನ್ನು ಬಲಿತೆಗೆದುಕೊಂಡಿದ್ದುವು. ಆ ಸಮಯದಲ್ಲಿ ದೇವಿಗೆ ಹರಕೆ, ಪೂಜೆ ಉತ್ಸವ ಜಾತ್ರೆಯನ್ನು ಮಾಡುವದಾಗಿ ಊರಿನ ಹಿರಿಯರು ಹರಕೆ ಹೇಳಿಕೊಂಡರು. ಆಗ ರೋಗವು ಸಂಪೂರ್ಣವಾಗಿನಿಂತು ಹೋಗಿ ಇವತ್ತಿನ ವರೆಗೆ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಈ ತಾಲ್ಲೂಕಿನಲ್ಲಿ ಕಾಣಿಸಿಕೊಳ್ಳಲಿಲ್ಲ. ಮೊದ ಮೊದಲು ಸಣ್ಣದಾಗಿ ಪ್ರಾರಂಭವಾದ ಈ ಜಾತ್ರೆಯು ನಿರಂತರ ನಿತ್ಯ ಪೂಜೆ, ಶುಕ್ರವಾರ ಮತ್ತು ಮಂಗಳವಾರ ಕುಂಕುಮಾರ್ಚನೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಆಕಷರ್ಿಸಿದೆ ಮತ್ತು ನವರಾತ್ರಿ ಸಮಯದಲ್ಲಿ ಕೂಡ 9 ದಿನಗಳ ಕಾಲ ನವರಾತ್ರಿ ಉತ್ಸವವೂ ನಡೆಯುತ್ತದೆ. ಈಗಿನ ಮಾರಿಕಾಂಬಾ ಗಂಡನ ಮನೆ ದೇವಸ್ಥಾನವು 2 ಸಿಂಹಗಳು ಎಳೆಯುವ ರಥದ ಮಾದರಿಯಲ್ಲಿ ಭವ್ಯವಾಗಿ ನಿರ್ಮಾಣವಾಗಿದೆ. ಇನ್ನೇಲ್ಲಿಯೂ ಕಾಣಸಿಗದಂತಹ ಈ ಅಪರೂಪದ ರಥದ ಮಾದರಿಯ ಗುಡಿಯ ಗೋಪುರವು ದೇವಿಯ ನಾನಾ ರೂಪವನ್ನು, ದೇವಿಯ ಮಹಾತ್ಮೆಯನ್ನು, ದೇವಿಯ ಮೂರ್ತಿ ರಚನೆಯ ಮೂಲಕ ಕಂಗೊಳಿಸುತ್ತದೆ. ಈ ಗುಡಿಯು ನಗರದ ಮಧ್ಯದಲ್ಲಿ, ಅತಿ ಎತ್ತರದ ಗೋಪುರವನ್ನು ಹೊಂದಿರುವುದು ಒಂದು ವಿಶೇಷ ಆಕರ್ಷಣೆ.

ವಸ್ತು ಪ್ರದರ್ಶನ

ಜಾತ್ರಾ ಸಂದರ್ಭದಲ್ಲಿ ಸುಮಾರು 300ಕ್ಕೂ ಮಿಕ್ಕಿ ವಸ್ತು ಪ್ರದರ್ಶನ ಮಳಿಗೆಗಳನ್ನು ರಚಿಸಲಾಗುತ್ತದೆ. ನಗರಸಭೆಯ ಗಾಂಧಿ ಮೈದಾನದಲ್ಲಿ, ಅಂತರಾಷ್ಟ್ರೀಯ ಖ್ಯಾತಿಯ ವಿವಿಧ ರೀತಿಯ ಅತ್ಯಾಧುನಿಕ ಮನೋರಂಜನಾ ಕ್ರೀಡೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮಗಳು

ಬುಧವಾರದಿಂದ ಬುಧವಾರದವರೆಗೆ 8 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಸುಂದರವಾದ ಶ್ರೀಮಾರಿಕಾಂಬಾ ಕಲಾ ಮಂಟಪದಲ್ಲಿ ನಡೆಯಲಿವೆ. ಅಲ್ಲದೆ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಹಾಗೂ ಅವರನ್ನು ಕರೆಸಿ ಇಲ್ಲಿ ಕಾರ್ಯಕ್ರಮವನ್ನು ನಡೆಸಲು ಅವಕಾಶ ಕೊಟ್ಟು ಅವರ ಪ್ರತಿಭೆಗಳನ್ನು ಹೊರಹೊಮ್ಮಲು ಉತ್ತಮ ಅವಕಾಶವನ್ನು ಕಲ್ಪಿಸಲಾಗಿದೆ.

The Marikamba Temple is located in Sagar City, in the Indian state of Karnataka. It features the image of the goddess Marikamba, a form of Durga or Parvati. The temple was built in the center of the city during the reign of Venkatappa Nayak who ruled over Keladi and Ikkeri kingdom during the 16th century. Marikamba was the family deity of the Nayaka dynasty.

History

Adi Shankaracharya, the philosopher saint of Hindu religion, during one of his tours around South India visited Sagar. During his stay in the town goddess Marikamba appeared in his dream and told him to establish a temple for her at this place. He then consecrated the foot prints of the goddess at the outer limits of the city. During this period (1596), Kadamba, Chalukya and Hoysala dynasties were at war with each other. At this time, Venkatappa Nayaka, ruler of the Keladi and Ikkeri kingdom, adopted this deity as his family goddess seeking blessings to attain victory in the battle. After he won the battle, he shifted the footprints of the goddess from the outskirts to a central location in the city and built a temple to house the footprints.

During the early 1950s, there was a move to shift the temple from the center of the city to the outer limits. At the time, the city was affected by the plague epidemic, the cause for which was attributed to the proposal of moving the temple.

Fair

Every three years, in the month of February, a 10-day fair is held at the venue of the temple. Known as the Marikamba Jathra (‘Jathra’ means “fair”), it is one of the major festivals of Karnataka. It has socio–religious importance and is attended by a large number of devotees from all regions of Karnataka.[citation needed] On this occasion, a 16 feet (4.9 m) high chariot, colourfully decorated and carrying the image of the idol, is taken out on a procession.[2]

COUNT DOWN

HISTORY OF SAGARA MARIKAMBA JATRE

ಸಾಗರ ಮಾರಿಕಾಂಬಾ ಜಾತ್ರೆಯ ಇತಿಹಾಸ

Give Your Suggestion

►►ಕರ್ನಾಟಕ ರಾಜ್ಯದ ಅತೀ ದೊಡ್ಡ ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ


2017 ಫೆಬ್ರವರಿ 14 ರಿಂದ 22ರ ವರೆಗೆ

ಸರ್ವರಿಗೂ ಆದರದ ಸ್ವಾಗತ.